ಭೂಪಾಲ್, ಡಿ.14 (DaijiworldNews/MB) : ''ಶೂದ್ರರನ್ನು ಶೂದ್ರರೆಂದಾಗ ಅವರಿಗೆ ಬೇಸರವಾಗುತ್ತದೆ ಏಕೆಂದರೆ ಅವರಿಗೆ ಅರ್ಥವಾಗಲ್ಲ'' ಎಂದು ಬಿಜೆಪಿ ಸಂಸದೆ ಪ್ರಜ್ಞಾ ಠಾಗೂರ್ ಹೇಳಿದ್ದಾರೆ.
ಈ ಬಗ್ಗೆ ಮಧ್ಯಪ್ರದೇಶದ ಸೆಹೋರ್ನಲ್ಲಿ ಮಾತನಾಡಿದ ಅವರು, ''ನಮ್ಮ ಧರ್ಮ ಶಾಸ್ತ್ರದಲ್ಲಿ ಸಮಾಜವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ. ಬ್ರಾಹ್ಮಣರನ್ನು ಬ್ರಾಹ್ಮಣರೆಂದಾಗ ಅವರು ಬೇಸರಪಡಲ್ಲ. ಕ್ಷತ್ರಿಯರನ್ನು ಕ್ಷತ್ರಿಯರೆಂದಾಗ ಬೇಸರಪಡಲ್ಲ. ವೈಶ್ಯರನ್ನು ವೈಶ್ಯರೆಂದಾಗ ಅವರಿಗೆ ಬೇಸರವಾಗಲ್ಲ. ಆದರೆ ಶೂದ್ರರನ್ನು ಶೂದ್ರರೆಂದಾಗ ಅವರಿಗೆ ಬೇಸರವಾಗುತ್ತದೆ. ಯಾಕೆಂದರೆ ಅವರಲ್ಲಿರುವ ಅಜ್ಞಾನದಿಂದ ಅವರಿಗೆ ಅರ್ಥವಾಗುವುದಿಲ್ಲ'' ಎಂದಿದ್ದಾರೆ.
ಈ ಸಂದರ್ಭದಲ್ಲೇ, ''ಮಮತಾ ಬ್ಯಾನರ್ಜಿ ಇದು ಪಾಕಿಸ್ತಾನವಲ್ಲ, ಭಾರತವೆಂದು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತ ಕೊನೆಯಾಗುತ್ತದೆ ಎಂದು ತಿಳಿದು ಅವರೀಗ ಭ್ರಮನಿರಸನಗೊಂಡಿದ್ದಾರೆ'' ಎಂದು ಹೇಳಿದರು.