ಬೆಂಗಳೂರು, ಡಿ.14 (DaijiworldNews/PY): ಸಾರಿಗೆ ನೌಕರರ ಪ್ರತಿಭಟನೆಯ ಕಿರಿಕಿರಿಯ ನಡುವೆಯೂ ಕೂಡಾ ಎಂಟಿಬಿ ನಾಗರಾಜ್ ಅವರು ತಮಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬಳಿಕ ಬಂದಿದ್ದರು.
ಸಚಿವ ಸಂಪುಟ ವಿಸ್ತರಣೆ ಇನ್ನೂ ಕೂಡಾ ವಿಳಂಬವಾಗುತ್ತಿರುವ ಕಾರಣ ಬೇಸರಗೊಂಡಿರುವ ಎಂಟಿಬಿ ಅವರು ಈ ವಿಚಾರವಾಗಿ ಸಾಕಷ್ಟು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನನಿತ್ಯವೂ ಕೂಡಾ ಎಂಟಿಬಿ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುತ್ತಿದ್ದು, ಸೋಮವಾರವೂ ಕೂಡಾ ಭೇಟಿ ನೀಡಿದ್ದಾರೆ.
"ನನ್ನನ್ನು ಕಂದಾಯ ಸಚಿವ ಆರ್.ಅಶೋಕ್ ಅವರೇ ಇಲ್ಲಿಗೆ ಕರೆತಂದಿದ್ದು, ನಾನು ಇಲ್ಲಿಗೆ ಬಂದು ಒಂದು ವರ್ಷವಾಗಿದೆ. ಸಿಎಂ ಅವರು ಸಾರಿಗೆ ನೌಕರರ 9 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಆದರೆ, ನನ್ನ ಬೇಡಿಕೆ ಇನ್ನೂ ಕೂಡಾ ಈಡೇರಿಸಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಸ್ಥಾನದ ವಿಚಾರವಾಗಿ ಸಂಕ್ರಾತಿಯವರೆಗೆ ಮಾತನಾಡಬೇಡಿ ಎಂದು ಸಿಎಂ ಅವರು ಎಂಟಿಬಿ ನಾಗರಾಜ್ ಅವರಿಗೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ.