ನವದೆಹಲಿ,ಡಿ.14(DaijiworldNews/HR): ಭಾರತೀಯ ಸೇನೆ ಪಾಕಿಸ್ತಾನ ಸೇನಾಪಡೆಯ ಎದುರು ಧೈರ್ಯದಿಂದ ಹೋರಾಟ ಮಾಡಿದ್ದು, ಪಾಕ್ ಹಿಂದೆ ಹೋಗುವಂತೆ ಮಾಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಎಫ್ಐಸಿಸಿಐಯ 93ನೇ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, "ಲಡಾಕ್ನಲ್ಲಿ ಅಪ್ರಚೋದಿತ ದಾಳಿ ನಡೆಯುತ್ತಿರುವುದು ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನಮಗೆ ತೊರಿಸಿಕೊಡುತ್ತಿದೆ ಜೊತೆಗೆ ಹಿಮಾಲಯ ಕಣಿವೆಯಲ್ಲಿ ಮಾತ್ರವಲ್ಲದೆ ಇಂಡೊ-ಫೆಸಿಫಿಕ್ ತೀರದುದ್ದಕ್ಕೂ ಅಧಿಕಾರ ಹೊಂದಲು ಗಡಿ ರಾಷ್ಟ್ರ ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ" ಎಂದರು.
ಇನ್ನು ಗಡಿ ಭಾಗದಲ್ಲಿ ಭಾರತೀಯ ಸೇನೆ ದೇಶವನ್ನು ಕಾಯುತ್ತಿರುವುದನ್ನು ನೋಡಿ ಮುಂದಿನ ಜನಾಂಗ ನೋಡಿ ಖುಷಿ ಪಡುತ್ತದೆ. ಗಡಿ ದಾಟಿ ಬಂದು ಯುದ್ಧ ಮಾಡಿದಾಗ ಅನೇಕ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ, ಆದರೆ ನಮ್ಮ ಸೈನ್ಯ ಅದಕ್ಕೆಲ್ಲ ಭಯಪಡದೆ ಭಯೋತ್ಪಾದಕರನ್ನು ಮಟ್ಟ ಹಾಕಿದೆ" ಎಂದು ಹೇಳಿದ್ದಾರೆ.
ರೈತರ ಪ್ರತಿಭಟನೆ ಕುರಿತು ಮಾತನಾಡಿದ ಅವರು, "ಕೃಷಿ ಕಾನೂನುಗಳ ವಿರುದ್ಧ ಮುಕ್ತ ಚರ್ಚೆಗೆ ಕೇಂದ್ರ ಸರಕಾರವು ಸದಾ ಸಿದ್ಧವಿದೆ. ಕೃಷಿ ವಲಯದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಕೃಷಿ ಕಾನೂನುಗಳನ್ನು ರೈತರ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ" ಎಂದರು.