ನವದೆಹಲಿ, ಡಿ.14 (DaijiworldNews/PY): "ವಿವಿಧ ಕಾನೂನುಗಳ ಮುಖೇನ ಸಮಾಜದಲ್ಲಿ ಭೀತಿಯನ್ನು ಉಂಟು ಮಾಡುವವವರು ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್ ಹೊರತು ರೈತರಲ್ಲ" ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
"ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಂಡು ದೇಶವನ್ನು ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ನಿನ್ನೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.
ಈ ಹೇಳಿಕೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕಪಿಲ್ ಸಿಬಲ್ ಅವರು, ಪ್ರ"ತಿಯೊಬ್ಬ ನಾಗರಿಕನನ್ನು ಎರಡು ಕಣ್ಣುಗಳಿಂದ ನೋಡುವವರು ಸಮಾಜದಲ್ಲಿ ದ್ವೇಷವನ್ನು ಹರಡುತ್ತಾರೆ. ಇದು ನೀತಿಗಳ ಮೂಲಕ ಸಮಾಜದಲ್ಲಿ ಭೀತಿಯನ್ನು ಉಂಟುಮಾಡುತ್ತದೆ. ಯಾರು ಗೋಡ್ಸೆಯನ್ನು ಹೊಗಳುತ್ತಾನೋ ಆತ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್, ನಮ್ಮ ರೈತರಲ್ಲ" ಎಂದಿದ್ದಾರೆ.