ಲಕ್ನೋ,ಡಿ.14(DaijiworldNews/HR): ಉತ್ತರ ಪ್ರದೇಶ ಮಹಾರಾಜಗಂಜ್ ಜಿಲ್ಲೆಯಲ್ಲಿ ಸಂಬಂಧಿಕರ ಆರು ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷದ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಆರು ವರ್ಷದ ಮಗುವನ್ನು ಅಪಹರಿಸಿ ನಂತರ ಹತ್ಯೆಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸಂತ್ರಸ್ತನ ಬಾಲಕನ ಕುಟುಂಬದಿಂದ 50 ಲಕ್ಷ ರೂ.ಗಳ ಸುಲಿಗೆ ಕೋರಿ ಪತ್ರ ಬರೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಇನ್ನು ಡಿಸೆಂಬರ್ 9 ರಂದು ಮಹಾರಾಜಗಂಜ್ ಜಿಲ್ಲೆಯ ದೀಪಕ್ ಗುಪ್ತ ಎಂಬ ಪುತ್ರನನ್ನು ಕಿಡ್ನಾಪ್ ಮಾಡಿ 50 ಲಕ್ಷ ರುಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ, ಈ ವಿಷಯ ತಿಳಿದ ಪೊಲೀಸರು ಬಳಿಕ ಕಾರ್ಯಾಚರಣೆ ನಡೆಸಿ ಅಪ್ರಾಪ್ತನನ್ನು ಬಂಧಿಸಿದ್ದಾರೆ.