ರಾಯ್ಪುರ, ಡಿ.14(DaijiworldNews/HR): ಮಾವೊವಾದಿಗಳು ಛತ್ತೀಸ್ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆಸಿದ್ದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಸಿಆರ್ಪಿಎಫ್ನ ಕೋಬ್ರಾ ಘಟಕದ ಯೋಧರೊಬ್ಬರು ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಬ್ರಾ 208ನೇ ಬೆಟಾಲಿಯನ್ಗೆ ಸೇರಿದ ಡೆಪ್ಯೂಟಿ ಕಮಾಂಡೆಂಟ್ ವಿಕಾಸ್ ಕುಮಾರ್ ಗಂಭೀರ ಗಾಯಗೊಂಡಿದ್ದರು, ಅವರನ್ನು ರಾಯ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಇನ್ನು ನವೆಂಬರ್ 28ರಂದು ಸುಕ್ಮಾದ ಚಿಂತಲ್ನರ್ ಪ್ರದೇಶದಲ್ಲಿ ಮಾವೊವಾದಿಗಳು ನಡೆಸಿದ ಐಇಡಿ ಸ್ಫೋಟದಲ್ಲಿ ಕೋಬ್ರಾ ಘಟಕದ ಅಧಿಕಾರಿಯೊಬ್ಬರು ಮೃತಪಟ್ಟು ಒಂಬತ್ತು ಕಮಾಂಡೊಗಳು ಗಾಯಗೊಂಡಿದ್ದರು.