ಬೆಂಗಳೂರು, ಡಿ.14 (DaijiworldNews/PY): ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಹಸಿರು ಸೇನೆ ಹಾಗೂ ಸಾರಿಗೆ ನೌಕರರ ಸಂಘಟನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಬಗ್ಗೆ ಆಲೋಚಿಸಿದ್ದೇವೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಷ್ಕರ ಹಿಂಪಡೆಯುವ ವಿಚಾರವಾಗಿ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.
"ನೌಕರರಿಗೆ ಸರ್ಕಾರದ ನಿಲುವಿನ ವಿಚಾರವಾಗಿ ಸಂತಸವಿಲ್ಲ. ನೌಕರರ 9 ಬೇಡಿಕೆಗಳ ಬಗ್ಗೆ ಸರ್ಕಾರದ ತೀರ್ಮಾನದಲ್ಲಿ ನ್ಯೂನತೆಗಳು ಕಾಣಿಸುತ್ತಿವೆ. ಈ ವಿಚಾರವಾಗಿ ನಾವು ಚರ್ಚಿಸಲಿದ್ದೇವೆ. ಆದರೆ, ಉಪವಾಸ ಸತ್ಯಾಗ್ರಹ ಮುಂದುವರೆಸುತ್ತೇವೆ" ಎಂದಿದ್ದಾರೆ.