ಪನಾಜಿ, ಡಿ.14 (DaijiworldNews/MB) : ಕೊರೊನಾ ಸೋಂಕು ಪಾಸಿಟಿವ್ ಆದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ತಮ್ಮ ಎರಡು ದಿನಗಳ ರಾಜ್ಯ ಪ್ರವಾಸವನ್ನು ಮುಂದೂಡಿದ್ದಾರೆ.
ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ರಾಷ್ಟ್ರವ್ಯಾಪಿ ಭೇಟಿಯ ಭಾಗವಾಗಿ ಡಿಸೆಂಬರ್ 20 ರಂದು ಗೋವಾಕ್ಕೆ ಆಗಮಿಸಲು ಈ ಹಿಂದೆ ನಿರ್ಧರಿಸಲಾಗಿತ್ತು.
ಬಿಜೆಪಿ ರಾಜ್ಯ ಅಧ್ಯಕ್ಷ ಸದಾನಂದ ಶೇಟ್ ತನವಡೆ, ''ನಡ್ಡಾ ಅವರ ಭೇಟಿಯ ಮುಂದಿನ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ'' ಎಂದು ತಿಳಿಸಿದರು.
ತಮ್ಮ ರಾಜ್ಯ ಭೇಟಿಯಲ್ಲಿ, ನಡ್ಡಾ ಅವರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡುವುದು, ಮಂಡಲ ಸಭೆ ಮತ್ತು ಪದಾಧಿಕಾರಿಗಳ ಸಭೆ, ಪದಾಧಿಕಾರಿಗಳ ಸಭೆ, ವಿವಿಧ ಮೋರ್ಚಾಗಳ ಸಮಿತಿ ಸಭೆ ಹಾಗೂ ಸದಸ್ಯರು, ಶಾಸಕರು, ಮಂತ್ರಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಲಿದ್ದರು.