ಜೈಪುರ್ , ಡಿ.14(DaijiworldNews/HR): ರಾಜಸ್ಥಾನದಲ್ಲಿ ಡಿಸೆಂಬರ್ 13 ರಂದು ನಡೆದ ಸ್ಥಳೀಯ ನಗರ ಸಂಸ್ಥೆ (ಯುಎಲ್ಬಿ) ಚುನಾವಣೆಯಲ್ಲಿ 619 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಬಿಜೆಪಿಯನ್ನು ಸೋಲಿಸಿದೆ ಎಂದು ತಿಳಿದು ಬಂದಿದೆ.
ಫಲಿತಾಂಶದ ಪ್ರಕಾರ 12 ಜಿಲ್ಲೆಗಳ 50 ಸ್ಥಳೀಯ ನಗರ ಸಂಸ್ಥೆಯ 1,775 ವಾರ್ಡ್ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 619 ವಾರ್ಡ್ಗಳಲ್ಲಿ ಮತ್ತು ಬಿಜೆಪಿ 548 ವಾರ್ಡ್ಗಳಲ್ಲಿ ಜಯ ಗಳಿಸಿದೆ.
ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 596 ವಾರ್ಡ್ಗಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಬಹುಜನ್ ಸಮಾಜ ಪಕ್ಷದ ಸದಸ್ಯರು 7 ವಾರ್ಡ್ಗಳಲ್ಲಿ ಗೆಲುವು ಸಾಧಿಸಿರುವುದಾಗಿ ವರದಿ ತಿಳಿಸಿದೆ.