ಪಶ್ಚಿಮ ಬಂಗಾಳ, ಡಿ.14(DaijiworldNews/HR): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಸೋತರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹತ್ಯೆಗೆ ಮುಂದಾಗಬಹುದು ಎಂದು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹಿರಿಯ ಮುಖಂಡ ಸುಬ್ರತಾ ಮುಖರ್ಜಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಪರಾಧ ಕೃತ್ಯಗಳನ್ನು ನಡೆಸಲು ಹೊರಗಿನಿಂದ ಜನರನ್ನು ಕರೆಸುತ್ತಿದೆ, ಪಶ್ಚಿಮ ಬಂಗಾಳದ ಅನೇಕ ಜನರು ಮಮತಾ ಬ್ಯಾನರ್ಜಿಯನ್ನು ತಾಯಿ ಎಂದು ಪೂಜಿಸುತ್ತಿದ್ದಾರೆ ಹಾಗಾಗಿ ಅವರಿಗೆ ಏನಾದರು ತೊಂದರೆಯಾದಲ್ಲಿ ಅದನ್ನು ತಡೆಯುವುದಕ್ಕಾಗಿ ನಾವು ರಕ್ತ ಹರಿಸಲೂ ಸಿದ್ಧ ಎಂದರು."
ಇನ್ನು "ಬಿಜೆಪಿಯು ಹೇಗಾದರು ಮಾಡಿ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದೆ ಜೊತೆಗೆ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದು, ಹೊರಗಿನಿಂದ ಜನರನ್ನು ಕರೆಸಿ ಪಶ್ಚಿಮ ಬಂಗಾಳದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದೆ" ಎಂದು ಹೇಳಿದ್ದಾರೆ.