ನವದೆಹಲಿ, ಡಿ.14 (DaijiworldNews/PY): "ಈಶಾನ್ಯ ರಾಜ್ಯಗಳ ಜನರಿಗೆ ಸೇವೆ ಸಲ್ಲಿಸಲು ಎನ್ಡಿಎ ಬದ್ಧವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಈಶಾನ್ಯ ರಾಜ್ಯಗಳ ಜನರಿಗೆ ಸೇವೆ ಸಲ್ಲಿಸಲು ಎನ್ಡಿಎ ಬದ್ಧವಾಗಿದೆ. ನಮ್ಮ ಮಿತ್ರಪಕ್ಷ ಯುಪಿಇಎನ್ ಹಾಗೂ ಅಸ್ಸಾಂ ಬಿಜೆಪಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಸ್ಸಾಂ ಬಿಟಿಸಿ ಚುನಾವಣೆಯಲ್ಲಿ ಬಹುಮತ ಗಳಿಸಿದೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸುತ್ತೇನೆ. ಎನ್ಡಿಎ ಮೈತ್ರಿಕೂಟದ ಮೇಲೆ ನಂಬಿಕೆ ಇಟ್ಟ ಜನರಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಅಧಿಕಾರದ ಗದ್ದುಗೆ ಏರಲು ಯುಪಿಪಿಎಲ್ಗೆ ಬಿಜೆಪಿ ಬೆಂಬಲ ಪ್ರಕಟಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.