ಬೆಂಗಳೂರು, ಡಿ. 13 (DaijiworldNews/SM): ಕಳೆದ 3 ದಿನಗಳಿಂದ ನಡೆಸುತ್ತಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಮುಷ್ಕರ ಕೊನೆಗೊಂಡಿದೆ. ಆ ಮೂಲಕ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಸಾರಿಗೆ ನೌಕರರ ಜೊತೆ ಸರಕಾರ ನಡೆಸಿರುವ ಮಾತುಕತೆ ಸಫಲವಾಗಿದೆ. ದಿನವಿಡೀ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಬಸ್ ಸಂಚಾರ ಪುನರಾರಂಭಿಸುವುದಕ್ಕೆ ಸಾರಿಗೆ ಸಂಘಟನೆ ಮುಖಂಡರು ಮುಂದಾಗಿದ್ದಾರೆ.
ಸದ್ಯ ಮಾತುಕತೆಯಲ್ಲಿ ಯಾವಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರಕಾರ ನೀಡಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ. ಪ್ರಮುಖವಾಗಿ ಸಾರಿಗೆ ಸಿಬ್ಬಂದಿಯನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕು ಎಂಬುದು ಮುಖ್ಯ ಆಗ್ರಹವಾಗಿತ್ತು.