ಭುವನೇಶ್ವರ, ಡಿ.13 (DaijiworldNews/PY): ಮಲ್ಕನ್ ಗಿರಿ ಜಿಲ್ಲೆಯ ಸ್ವಾಭಿಮಾನ್ ಪ್ರದೇಶದ ಸಿಂಗ್ರಾಮ್ ಗ್ರಾಮದಲ್ಲಿ ಭದ್ರತಾ ಪಡೆಗಳ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮಹಿಳೆ ಸೇರಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
"ನಕ್ಸಲರಿಂದ 20 ಸುತ್ತು ಮದ್ದು ಗುಂಡುಗಳು, ಸೇರಿದಂತೆ ಒಂದು ಒಂದು ಇನ್ಸಾಫ್ ರೈಫಲ್ , ಒಂದು ಎಸ್ಎಲ್ಆರ್, ನಕ್ಸಲರ ಮೂರು ಚೀಲಗಳು ಹಾಗೂ ಕೆಲವು ಸ್ಪೋಟಕ ವಸ್ತಗಳನ್ನು ಭದ್ರತಾ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ" ಎಂದು ಒಡಿಶಾ ಡಿಜಿಪಿ ಅಭಯ್ ಹೇಳಿದ್ದಾರೆ.
"ರವಿವಾರ ಮುಂಜಾನೆ 3.30 ರಿಂದ 4 ಗಂಟೆಯ ಮಧ್ಯೆ ಎಸ್ಒಜಿ ಪೊಲೀಸ್ ಠಾಣೆಯ ಗಜಲ್ಮಾಮುಡಿ ಪಂಚಾಯತ್ನ ಸಿಂಗರಂ-ಟೆಂಟಾಪಲ್ಲಿ ಪ್ರದೇಶದಲ್ಲಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಕೈಗೊಂಡಿತ್ತು" ಎಂದಿದ್ದಾರೆ.