ಅಹಮದಾಬಾದ್, ಡಿ.13 (DaijiworldNews/PY): ಬೋನಸ್ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಮಾಜಿ ಗೃಹ ಸಚಿವ ಹಾಗೂ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ಮಾಜಿ ಅಧ್ಯಕ್ಷ ವಿಪುಲ್ ಚೌಧರಿ ಅವರನ್ನು ರವಿವಾರ ಗುಜರಾತ್ ಪೊಲೀಸ್ನ ಅಪರಾಧ ತನಿಖಾ ಇಲಾಖೆ ಬಂಧಿಸಿದೆ.
ಜನವರಿ 5 ರಂದು ನಡೆಯಲಿರುವ ಮೆಹ್ಸಾನ ದೂಧ್ ಸಾಗರ್ ಡೈರಿ ಚುನಾವಣೆ ನಡೆಯುವ ಕೆಲವೇ ವಾರಗಳ ಮುನ್ನ ವಿಪುಲ್ ಚೌಧರಿ ಅವರನ್ನು ಗುಜರಾತ್ ಪೊಲೀಸ್ನ ಅಪರಾಧ ತನಿಖಾ ಇಲಾಖೆ ಬಂಧಿಸಿದೆ.
ಚೌಧರಿ ಅವರು ದೂಧ್ಸಾಗರ್ ಡೈರಿಯ ಮುಖ್ಯಸ್ಥರಾಗಿದ್ದು, ಅವರನ್ನು ಜಿಸಿಎಂಎಂಎಫ್ ಹಾಗೂ ದೂಧ್ಸಾಗರ್ ಡೈರಿಯಿಂದ 2014ರಲ್ಲಿ ಉಚ್ಛಾಟಿಸಲಾಗಿತ್ತು. ಆ ಸಂದರ್ಭ ಚೌಧರಿ ಅವರು 22 ಕೋಟಿ.ರೂ. ಮೇವುಹಗರಣದಲ್ಲಿ ಭ್ರಷ್ಟಾಚಾರ ಪ್ರಕರಣ ಎದುರಿಸಿದ್ದರು.