ನವದೆಹಲಿ, ಡಿ.13 (DaijiworldNews/PY): "ಇಂದು ಮಧ್ಯರಾತ್ರಿಯಿಂದಲೇ ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ವ್ಯವಸ್ಥೆಯು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ" ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಆರ್ಬಿಐ ಗವರ್ನರ್ ಆಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ವ್ಯವಸ್ಥೆಯು ಕಳೆದ ಡಿ.1ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ತಡವಾದರೂ ಕೂಡಾ ಸೋಮವಾರದಿಂದ ಜಾರಿಗೆ ಬರುತ್ತಿದೆ. ಭಾರತವೂ ಕೂಡಾ ಈ ರೀತಿಯಾದ ಸೌಲಭ್ಯವನ್ನು ನೀಡಿದ ದೇಶಗಳ ಸಾಲಿಗೆ ಸೇರ್ಪಡೆಯಾಗಿರುವುದು ಸಂತೋಷದ ಸಂಗತಿ" ಎಂದಿದ್ದಾರೆ.
ವಾರದ ಎಲ್ಲಾ ದಿನಗಳಲ್ಲಿ ರುಪೇ, ಐಎಂಪಿಎಸ್, ಎಇಪಿಎಸ್, ಯುಪಿಐ, ಎನ್ಎಫ್ಎಸ್, ಎನ್ಇಟಿಸಿ ಹಿವಾಟುಗಳ ಇತ್ಯರ್ಥಕ್ಕೆ ಸಹಾಯವಾಗಲಿದೆ.