ಬೆಂಗಳೂರು, ಡಿ.13 (DaijiworldNews/PY): "ಖಾಸಗಿ ಬಸ್ಗಳನ್ನು ಬಳಸುವುದು ತಾತ್ಕಾಲಿಕ ಪರಿಹಾರವಷ್ಟೆ. ನೌಕರರನ್ನು ಸೌಜನ್ಯಕ್ಕಾದರೂ ಮಾತುಕತೆಗೆ ಆಹ್ವಾನಿಸಬೇಕಿತ್ತು. ಈ ವಿಚಾರದಲ್ಲಿ ಸರ್ಕಾರ ಮತ್ತು ನೌಕರರೂ ಕೂಡ ಹಠ ಬಿಡಬೇಕಿದೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನೌಕರರು ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟ ಇನ್ನೆಷ್ಟು ದಿನ?. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಪ್ರಯಾಣಿಕರ ಪರಿಸ್ಥಿತಿ. ಖಾಸಗಿ ಬಸ್ಗಳನ್ನು ಬಳಸುವುದು ತಾತ್ಕಾಲಿಕ ಪರಿಹಾರವಷ್ಟೆ. ನೌಕರರನ್ನು ಸೌಜನ್ಯಕ್ಕಾದರೂ ಮಾತುಕತೆಗೆ ಆಹ್ವಾನಿಸಬೇಕಿತ್ತು. ಈ ವಿಚಾರದಲ್ಲಿ ಸರ್ಕಾರ ಮತ್ತು ನೌಕರರೂ ಕೂಡ ಹಠ ಬಿಡಬೇಕಿದೆ" ಎಂದಿದ್ದಾರೆ.
ಸಾರಿಗೆ ನೌಕರರು ಪ್ರತಿಭಟನೆ ರವಿವಾರವೂ ಮುಂದುವರೆದಿದ್ದು, ಅವರ ಮನವೊಲಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.