ಸೆಹೋರ್ ,ಡಿ.13 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ಶೀಘ್ರವೇ ಹಿಂದೂ ರಾಜ್ಯಭಾರ ಆರಂಭವಾಗಲಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಪಶ್ಚಿಮ ಬಂಗಾಳದಲ್ಲಿ ಜೆ. ಪಿ. ನಡ್ಡಾ ಅವರ ಬೆಂಗಾವಲು ಪಡೆ ಮೇಲಿನ ದಾಳಿ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ,ಮಮತಾ ಬ್ಯಾನರ್ಜಿ ತನ್ನ ಅಧಿಕಾರವಧಿ ಅಂತ್ಯವಾಗಲಿದೆ ಎಂಬುದನ್ನು ಅರಿತು ನಿರಾಶೆಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಹಿಂದೂ ರಾಜ್ ಇರಲಿದೆ ಎಂದರು,"
ಇನ್ನು ಪಶ್ಚಿಮ ಬಂಗಾಳ ಗವರ್ನರ್ ಜಗದೀಪ್ ಧಂಕರ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತವು ಕಾನೂನು ಮತ್ತು ಸಂವಿಧಾನದಿಂದ ಹೆಚ್ಚು ದೂರವಾಗುತ್ತಿದೆ ಎಂದು ಹೇಳಿದ್ದರು.