ಮುಂಬೈ,ಡಿ.13 (DaijiworldNews/HR): ಟಿಆರ್ಪಿ ತಿರುಚಿದ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಖಾಂಚಂದಾನಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ಖಾಂಚಂದಾನಿ ಬಂಧನಕ್ಕೊಳಗಾದ 13ನೇ ವ್ಯಕ್ತಿಯಾಗಿದ್ದಾರೆ.
ಇನ್ನು ಅಕ್ಟೋಬರ್ 6 ರಂದು ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಹಂಸ ರಿಸರ್ಚ್ ಅಧಿಕಾರಿ ನಿತಿನ್ ದೇವೊಕರ್ ದೂರು ಸಲ್ಲಿಸಿದ ಬಳಿಕ ತನಿಖೆಯನ್ನು ಆರಂಭಿಸಿದ್ದರು.