ಬೆಂಗಳೂರು,ಡಿ.13 (DaijiworldNews/HR): ವಿಧಾನ ಪರಿಷತ್ ಕಲಾಪವು ಸರಕಾರದ ಸೂಚನೆಯಂತೆ ಡಿ.15 ರಂದು ಒಂದು ದಿನ ಮತ್ತೆ ನಡೆಯಲಿದ್ದು, ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮತ್ತು ಸರಕಾರದ ನಡುವಣ ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ.
ಒಂದು ದಿನ ನಡೆಯುವ ವಿಶೇಷ ಕಲಾಪದಲ್ಲಿ ಸಭಾಪತಿ ಪದಚ್ಯುತಿ ವಿಚಾರದ ಬಗ್ಗೆ ಚರ್ಚಿಸಲು ಬಿಜೆಪಿ ಉತ್ಸಾಹದಲ್ಲಿದ್ದು, ಕಾಂಗ್ರೆಸ್ ಕಾನೂನಾತ್ಮಕ ಹೆಜ್ಜೆ ಇಡಲು ಸಜ್ಜಾಗಿದೆ. ಜೆಡಿಎಸ್ ತನ್ನ ತೀರ್ಮಾನ ಏನು ಎಂಬುದನ್ನು ಕಲಾಪದ ಸಂದರ್ಭದಲ್ಲೇ ನಿರ್ಧರಿಸುವುದಾಗಿ ಹೇಳಿದೆ.
ಇನ್ನು ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ವಿಚಾರ ಚರ್ಚೆಗೆ ಬಂದರೆ ಪಕ್ಷದ ಪರಿಷತ್ ಸದಸ್ಯರು, ಹಿರಿಯ ನಾಯಕರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.