ಧಾರವಾಡ,ಡಿ.13 (DaijiworldNews/HR): ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ ಗೌಡನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚಂದ್ರಶೇಖರ ಇಂಡಿ ಹಾಗೂ ಭೀಮಾ ತೀರದ ಧರ್ಮರಾಜ ಚಡಚಣ ಸಹಚರ ನಾಗಪ್ಪ ಎಂಬುವವರನ್ನು ವಿಜಯಪುರದಲ್ಲಿ ಶನಿವಾರ ಬಂಧಿಸಿ ಉಪನಗರ ಠಾಣೆಗೆ ಕರೆತಂದಿದ್ದಾರೆ.
ಚಂದ್ರಶೇಖರ ಇಂಡಿ ಅವರನ್ನು ಈಗಾಗಲೇ ಅನೇಕ ಬಾರಿ ವಿಚಾರಣೆಗೆ ಒಳಪಡಿಸಿದ ತಂಡ, ಇದೀಗ ಅವರೊಂದಿಗೆ ಭೀಮಾ ತೀರದ ನಾಗಪ್ಪ ಎಂಬ ವ್ಯಕ್ತಿಯನ್ನು ಕೊಲೆ ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಇನ್ನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ನ್ಯಾಯಾಂಗ ಬಂಧನ ಡಿ. 21ರವರೆಗೆ ವಿಸ್ತರಣೆಯಾಗಿದೆ.