ತಿರುವನಂತಪುರಂ, ಡಿ.13 (DaijiworldNews/HR): ಕೊರೊನಾ ಲಸಿಕೆ ಲಭ್ಯವಾದ ತಕ್ಷಣ ಉಚಿತವಾಗಿ ಕೇರಳ ಎಲ್ಲಾ ಜನರಿಗೆ ಒದಗಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೇರಳದ ಜನರಿಗೆ ಕೊರೊನಾ ಲಸಿಕೆ ವಿಚಾರದಲ್ಲಿ ಯಾವುದೇ ಸಂಶಯ ಬೇಡ, ಲಸಿಕೆ ಲಭ್ಯವಾಗುತ್ತಿದ್ದಂತೆ ಉಚಿತವಾಗಿ ನೀಡಲಾಗುವುದು. ಅದಕ್ಕೆ ಯಾವುದೇ ರೀತಿಯ ಮೊತ್ತವನ್ನು ಸರ್ಕಾರ ಕೇಳುವುದಿಲ್ಲ ಎಂದರು".
ಇನ್ನು ಮಧ್ಯ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಉಚಿತ ಕೊರೊನಾ ಲಸಿಕೆ ವುತರಿಸುವುದಾಗಿ ಈಗಾಗಲೇ ನೀಡಿದ್ದು, ಅಕ್ಟೋಬರ್ ತಿಂಗಳಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಉಚಿತ ಲಸಿಕೆಯ ಒದಗಿಸುವ ಭರವಸೆ ನೀಡಿತ್ತು.