ಕೋಯಿಕ್ಕೋಡ್, ಡಿ.12 (DaijiworldNews/MB) : ಖ್ಯಾತ ಸಾಹಿತಿ ಯು.ಎ.ಖಾದರ್ ಅವರು ಕೋಯಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. 85 ವರ್ಷದ ಅವರು ಶ್ವಾಸಕೋಶದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.
ಕೇಂದ್ರ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಖಾದರ್ ಅವರು ವರ್ಣಚಿತ್ರಕಾರರು ಹಾಗೂ ಪತ್ರಕರ್ತರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ.
ಅವರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (2009), ಕೇರಳ ಸಾಹಿತ್ಯ ಅಕಾಡಮಿ ಪ್ರಶಸ್ತಿ (1984, 2002) ಎಸ್ಕೆ ಪೋಟಕ್ಕಾಡ್ ಪ್ರಶಸ್ತಿ (1993) ಮತ್ತು ಮಲಯಾಟೂರ್ ಪ್ರಶಸ್ತಿ, ಸಿ.ಎಚ್ ಮುಹಮ್ಮದ್ ಕೋಯ ಸಾಹಿತ್ಯ ಪ್ರಶಸ್ತಿ, ಅಬುಧಾಬಿ ಶಕ್ತಿ ಪ್ರಶಸ್ತಿ, ಮಾತೃಭೂಮಿ ಸಾಹಿತ್ಯ ಪುರಸ್ಕಾರ ಮತ್ತಿತರ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮೃತರ ಪಾರ್ಥಿವ ಶರೀರಿವನ್ನು ಕೋಝಿಕ್ಕೋಡ್ ಹತ್ತಿರದ ಪೂಕುನ್ನು ಎಂಬಲ್ಲಿರುವ "ಅಕ್ಷರ" ನಿವಾಸಕ್ಕೆ ತರಲಾಗಿದ್ದು ಅಂತ್ಯಕ್ರಿಯೆಯು ರವಿವಾರ ನಡೆಯಲಿದೆ.