ಮಹಾರಾಷ್ಟ್ರ, ಡಿ.12 (DaijiworldNews/HR): ಎಂದಿಗೂ ಕೂಡ ರಾಜಕೀಯ ಕಾರ್ಯಕರ್ತರು ಸಿದ್ಧಾಂತದ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಈ ಕುರಿತು ತಮ್ಮ ಹುಟ್ಟುಹಬ್ಬದಂದು ನಗರದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಮಾರಂಭದಲ್ಲಿ ಮಾತನಾಡಿದ ಅವರು, "ಹೊಸ ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ರೂಪಿಸುವುದು ಮುಂದಕ್ಕೆ ರಾಜ್ಯ ಮತ್ತು ದೇಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಜೊತೆಗೆ ರಾಜಕೀಯ ಕಾರ್ಯಕರ್ತರು ತಮ್ಮ ಸಿದ್ಧಾಂತದ ಬಗ್ಗೆ ದೃಢವಾಗಿರುವುದು ಬಹಳ ಮುಖ್ಯ" ಎಂದರು.
ಇನ್ನು "ಸಾಮಾಜಿಕ ಸುಧಾರಣಾವಾದಿಗಳಾದ ಜ್ಯೋತಿ ಬಾ ಫುಲೆ ಮತ್ತು ಅಂಬೇಡ್ಕರ್ ಅವರು ಜನರ ಸಾಮಾಜಿಕ ಉನ್ನತಿಗಾಗಿ ಕೆಲಸ ಮಾಡುವಾಗ ವೈಜ್ಞಾನಿಕ ಮನೋಭಾವವನ್ನು ಬಳಸಿದ್ದಾರೆ. ಹಾಗಾಗಿ ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ" ಎಂದು ಹೇಳಿದ್ದಾರೆ.