ಬೆಂಗಳೂರು, ಡಿ.12 (DaijiworldNews/PY): "ಸರ್ಕಾರ ಎಂದಿಗೂ ಕೂಡಾ ನೌಕರರ ಕಷ್ಟದೊಂದಿಗೆ ಇದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನೌಕರರ ಬೇಡಿಕೆ ಈಡೇರಿಸುವುದು ಕಷ್ಟದ ಕೆಲಸ. ಶೀಘ್ರವೇ ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದ್ದಾರೆ.
ಸಿಎಂ ಸರಕಾರಿ ನಿವಾಸ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸರ್ಕಾರ ಯಾವತ್ತೂ ಕೂಡಾ ನೌಕರರ ಕಷ್ಟದೊಂದಿಗೆ ಇದೆ. ಈ ವಿಚಾರದಲ್ಲಿ ಸಾರಿಗೆ ಸಚಿವರು ಯಾವುದೇ ನಿರ್ಲಕ್ಷ್ಯ ತೋರಿಲ್ಲ. ಅವರು ನೌಕರರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ" ಎಂದರು.
"ಎಸ್ಮಾ ಜಾರಿ ಪರಿಸ್ಥಿತಿ ಇನ್ನೂ ಕೂಡಾ ಬಂದಿಲ್ಲ. ಜನರ ಕಷ್ಟ ಏನೆಂದು ನೌಕರರಿಗೂ ತಿಳಿದಿದೆ. ಈ ವಿಚಾರವಾಗಿ ಒಂದೆರಡು ದಿನಗಳಲ್ಲಿ ನಿವಾರಣೆಯಾಗಲಿದೆ. ಮೊದಲು ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ" ಎಂದು ಹೇಳಿದರು.