ಮುಂಬೈ, ಡಿ.12 (DaijiworldNews/HR): ಬಾಲಿವುಡ್ ನಟಿ ಆರ್ಯಾ ಬ್ಯಾನರ್ಜಿ(35) ಅವರ ದೇಹ ಮೃತಪಟ್ಟ ಸ್ಥಿತಿಯಲ್ಲಿ ಕೋಲ್ಕತಾದ ತಮ್ಮ ನಿವಾಸದಲ್ಲಿ ಪತ್ತೆಯಾಗಿದ್ದಾರೆ.
ಆರ್ಯಾ ಬ್ಯಾನರ್ಜಿ ದಿವಂಗತ ನಟಿ ಪಂಡಿತ್ ನಿಖಿಲ್ ಬ್ಯಾನರ್ಜಿ ಅವರ ಪುತ್ರಿಯಾಗಿದ್ದು, 2010ರಲ್ಲಿ ದಿಬಾಕರ್ ಬ್ಯಾನರ್ಜಿ ಅವರ 'ಲವ್ ಸೆಕ್ಸ್ ಔರ್ ದೋಖಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ನಟಿಯ ದೇಹದಲ್ಲಿ ಯಾವುದೇ ಗುರುತು ಕಂಡುಬಂದಿಲ್ಲ, ಆರ್ಯಾ ಅವರು ಮನೆಯಲ್ಲಿ ಒಂಟಿಯಾಗಿ ವಾಸವಾಗದ್ದು ಮುಖ ಕೆಳಗಾಗಿ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಯಾ ಬ್ಯಾನರ್ಜಿ ಅವರು ಸಿನಿಮಾ ಮಾತ್ರವಲ್ಲದೆ ಹಲವಾರು ಮೊಡೆಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.