ನವದೆಹಲಿ, ಡಿ.12 (DaijiworldNews/HR): ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ಹಿಂಪಡೆಯಲು ರೈತರು ಇನ್ನೆಷ್ಟು ತ್ಯಾಗ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನೂತನವಾಗಿ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು 17 ದಿನಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ 11 ಮಂದಿ ರೈತರು ಮೃತಪತ್ಟಿದ್ದಾರೆ" ಎಂದರು.
ಇನ್ನು ಈ ಮಸೂದೆಯನ್ನು ಹಿಂಪಡೆಯದಿದ್ದಲ್ಲಿ ಇನ್ನು ಅನೇಕ ರೈತರು ಸಾವನ್ನಪ್ಪುತ್ತಾರೆ, ಇನ್ನೆಷ್ಟು ರೈತರ ಬಲಿದಾನ ಆಗಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.