ಜಮ್ಮು, ಡಿ.12 (DaijiworldNews/PY): ಜಮ್ಮು-ಕಾಶ್ಮೀರದಲ್ಲಿ ಡಿ.11ರ ಶುಕ್ರವಾರದಂದು ಉಂಟಾಗಿರುವ ಹಿಮಪಾತದಿಂದಾಗಿ 270 ಕಿ.ಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗುರ್ಮುಲ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಎಂಟು ಕುಟುಂಬಗಳನ್ನು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಹೆದ್ದಾರಿಯ ಜವಾಹರ್ ಸುರಂಗದಲ್ಲಿ ನೆಲದಲ್ಲಿ ಒಂಬತ್ತು ಇಂಚು ಹಿಮ ಸಂಗ್ರಹವಾಗಿದೆ ಹಾಗೂ ಮರಾಗ್, ಮಗರ್ಕೋಟ್ ಮತ್ತು ಪಂಥಿಯಾಲ್ನಲ್ಲಿ ಮಳೆಯಾದ ನಂತರ ಭೂಕುಸಿತದಿಂದಾಗಿ ಹಲವಾರು ಕಡೆಗಳಲ್ಲಿ ರಸ್ತೆ ತಡೆ ಉಂಟಾಗಿದೆ ಎಂದಿದ್ದಾರೆ.
ಕಾಶ್ಮೀರ ಪ್ರದೇಶವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರವನ್ನು ಶೀಘ್ರವಾಗಿ ಮರುಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.