ನವದೆಹಲಿ, ಡಿ.12 (DaijiworldNews/HR): ಇನ್ನು ಮುಂದಕ್ಕೆ ಮತದಾರರಿಗೆ ಡಿಜಿಟಲ್ ರೂಪದಲ್ಲಿ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ಚಿಂತನೆ ನಡೆಸುತ್ತಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಡಿಜಿಟಲ್ ಗುರುತಿನ ಚೀಟಿ ಬಗ್ಗೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಲಹೆಗಳು ಬಂದಿದ್ದು, ಇದನ್ನು ಯಾವ ರೀತಿ ಜಾರಿಗೊಳಿಸುವ ಎನ್ನುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಡಿಜಿಟಲ್ ಗುರುತಿನ ಚೀಟಿ ಮೊಬೈಲ್, ವೆಬ್ಸೈಟ್, ಇ–ಮೇಲ್ನಲ್ಲಿ ದೊರೆಯಬಹುದಾಗಿದ್ದು, ಸುಲಭವಾಗಿ ಮತ್ತು ತ್ವರಿತವಾಗಿ ಗುರುತಿನ ಚೀಟಿ ಲಭ್ಯವಾಗಬೇಕು ಎನ್ನುವುದು ಆಯೋಗದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.