ನವದೆಹಲಿ,ಡಿ.12 (DaijiworldNews/HR): ದಿವಂಗತ ಪ್ರಣಬ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಭಾಗ 'ದಿ ಪ್ರೆಸಿಡೆನ್ಷಿಯಲ್ ಇಯರ್ಸ್-2012-2017' ಕೃತಿಯಲ್ಲಿ ಮೋದಿ, ಮನ ಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರ ಕಾರ್ಯವೈಖರಿಯನ್ನು ಉಲ್ಲೇಖಿಸಿದ್ದು, ಅದರಲ್ಲಿ ಸೋನಿಯಾ ಗಾಂಧಿ 'ಅಸಮರ್ಥ'ರಾಗಿದ್ದರು ಎಂದು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 'ನಿರಂಕುಶ ಶೈಲಿಯ ಕಾರ್ಯವೈಖರಿ'ಯನ್ನು ಪ್ರಯೋಗಿಸಿದರೆ, ಮನ ಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯುಪಿಎಯನ್ನು ಉಳಿಸುವುದರಲ್ಲೇ 'ತಲ್ಲೀನ'ರಾಗಿದ್ದುದು ಆಡ ಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಲೋಕಸಭೆ ಚುನಾವಣೆಗೂ ಮುನ್ನ (2014) ರಾಜಕೀಯ ಗುರಿ ಕಳೆದುಕೊಂಡಿದ್ದ ಕಾಂಗ್ರೆಸ್ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ 'ಅಸಮರ್ಥ'ರಾಗಿದ್ದರು ಎಂದು ಪ್ರಣಬ್ ಬರೆದುಕೊಂಡಿದ್ದಾರೆ.
ಇನ್ನು ಪ್ರಣಬ್ ಮುಖರ್ಜಿ ಅವರು ತಮ್ಮ ಆತ್ಮಕಥೆಯ ನಾಲ್ಕನೇ ಭಾಗ 'ದಿ ಪ್ರೆಸಿಡೆನ್ಷಿಯಲ್ ಇಯರ್ಸ್-2012-2017' ಕೃತಿ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ. ಅವರು ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿನ ವಿದ್ಯಮಾನಗಳ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖವಿದೆ.