ಜೈಪುರ, ಡಿ.12 (DaijiworldNews/HR): ಭಾರತೀಯ ಟ್ರಿಬಲ್ ಪಕ್ಷ (ಬಿಟಿಪಿ) ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ದುಂಗಾರ್ಪುರ್ನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ಬಿಜೆಪಿಗೆ ಸೇರಿ ಬಿಟಿಪಿ ಪಕ್ಷಕ್ಕೆ ಅಧಿಕಾರ ತಪ್ಪಿಸಿದ್ದರಿಂದ ಬಿಟಿಪಿಯ ವರಿಷ್ಠರು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಬಿಟಿಪಿಯ ಶಾಸಕ ಹಾಗೂ ಹಿರಿಯ ಮುಖಂಡ ರಾಮಪ್ರಸಾದ್ ಮಾತನಾಡಿ, "ಬಿಟಿಪಿ ಪಕ್ಷ ಇಬ್ಬರು ಶಾಸಕರನ್ನು ಹೊಂದಿದ್ದು, ನಾವು ಗೆಹ್ಲೋಟ್ ಸರ್ಕಾರ ಇಕ್ಕಟ್ಟಿನಲ್ಲಿ ಇದ್ದಾಗ ಸಹಾಯ ಮಾಡಿದೆವು. ಆದರೆ ಅವರು ನಮಗೆ ಮೋಸ ಮಾಡಿದ್ದಾರೆ ಹಾಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿದ್ದೇವೆ" ಎಂದರು.