ಕೊಚ್ಚಿ, ಡಿ.12 (DaijiworldNews/HR): ಕೇರಳದಲ್ಲಿ ತನ್ನ ಕಾರಿನ ಹಿಂಬದಿಗೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಪೋಲಿಸರು ಬಂಧಿಸಿದ್ದಾರೆ.
ಆತ ತನ್ನ ಕಾರಿನಲ್ಲಿ ನಾಯಿಯನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಚಿತ್ರೀಕರಿಸಿ, ಕಾರನ್ನು ತಡೆದು ನಿಲ್ಲಿಸಿದ ಬಳಿಕ ಕಾರಿನ ಮಾಲೀಕ ಹಗ್ಗವನ್ನು ತೆಗೆದು ಗಾಯಗೊಂಡ ನಾಯಿಯನ್ನು ರಸ್ತೆಗೆ ಬಿಟ್ಟಿದ್ದಾನೆ.
ನಂತರ ದ್ವಿಚಕ್ರ ವಾಹನ ಸವಾರ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನಾಯಿ ಮಾಲೀಕರ ವಿರುದ್ಧ ಪೋಲಿಸರು ಕ್ರಮ ಕೈಗೊಂಡಿದ್ದು ಆತನನ್ನು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ನಾಯಿ ಮಾಲೀಕರನ್ನು ಬಂಧಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಗಾಯಗೊಂಡ ನಾಯಿಯನ್ನು ನಂತರ ದಯಾ ಎಂಬ ಸ್ವಯಂಸೇವಾ ಸಂಸ್ಥೆಯ ವಶದಲ್ಲಿದೆ ಎಂದು ತಿಳಿಸಿದ್ದಾರೆ.
ಘಟನೆ ತಿಳಿದ ರಾಜ್ಯ ಸಾರಿಗೆ ಸಚಿವ ಎ.ಕೆ.ಸಸೀಂದ್ರನ್ ಆತನ ಕಾರನ್ನು ವಶಪಡಿಸಿಕೊಂಡು, ಚಾಲಕನ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದರು.