ನವದೆಹಲಿ, ಡಿ.12 (DaijiworldNews/PY): "ಕಳೆದ ಆರು ತಿಂಗಳಿನಿಂದ ಪೂರ್ವ ಲಡಾಖ್ನಲ್ಲಿ ಸೇನಾ ಸಂಘರ್ಷಕ್ಕೆ ಎಲ್ಎಸಿಯನ್ನು ಏಕಪಕ್ಷೀಯವಾಗಿ ಬದಲಾವಣೆ ಮಾಡಲು ಹೊರಟಿರುವ ಚೀನಾ ನಡೆಯೇ ಕಾರಣ" ಎಂದು ಭಾರತ ಹೇಳಿದೆ.
ಭಾರತವೇ ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷ ನಿರ್ಮಾಣವಾಗಲು ಕಾರಣ ಎಂದು ಚೀನಾ ವಿದೇಶಾಂಗ ಸಚಿವಾಲಯ ಆರೋಪಿಸಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, "ಈ ವಿಚಾರವಾಗಿ ನಾವು ನಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಹಿಂದೆ ಹಲವು ಬಾರಿ ನಿರೂಪಿಸಲಾಗಿದೆ. ಎಲ್ಎಸಿಯಲ್ಲಿ ಶಾಂತಿಯ ಬಗೆಗಿನ ಚೀನಾದ ನಡೆಯು ದ್ವಿಪಕ್ಷೀಯವಾದ ಉಲ್ಲಂಘನೆಯಾಗಿದೆ" ಎಂದಿದ್ದಾರೆ.
"ಈ ಕ್ರಮ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಎಲ್ಎಸಿಯ ಉದ್ದಕ್ಕೂ ಶಾಂತಿಯನ್ನು ಖಾತರಿಪಡಿಸುವ ದ್ವಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದೆ" ಎಂದು ಹೇಳಿದ್ದಾರೆ.