ನವದೆಹಲಿ, ಡಿ.12 (DaijiworldNews/PY): "ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ ತರುವ ಪ್ರಕ್ರಿಯೆಯಲ್ಲಿ, ಇದರ ನೇತೃತ್ವ ಹಾಗೂ ನಿಯಂತ್ರಣವನ್ನು ಅಫ್ಘಾನಿಸ್ತಾನವೇ ಹೊಂದಿರುವುದು ಮುಖ್ಯ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕಾತ್ ಮಿರ್ಜಿಯೊಯಿವ್ ಅವರು ಉಪಸ್ಥಿತರಿದ್ದ ಶೃಂಗಸಭೆಯಲ್ಲಿ ಆನ್ಲೈನ್ ಮುಖಾಂತರ ಭಾಗವಹಿಸಿದ ಪ್ರಧಾನಿ ಮೋದಿ, "ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಅಫ್ಘಾನಿಸ್ತಾನವೇ ನೇತೃತ್ವ ಹಾಗೂ ನಿಯಂತ್ರಿಸಬೇಕು. ಭಾರತ ಹಾಗೂ ಉಜ್ಬೇಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಸದೃಢವಾಗಿ ನಿಂತಿದೆ" ಎಂದಿದ್ದಾರೆ.
"ಭಾರತಕ್ಕೆ ಉಜ್ಜೇಕಿಸ್ತಾನದೊಂದಿಗೆ ಅಭಿವೃದ್ಧಿ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವ ಬಯಕೆಯಿದೆ. ಎರಡೂ ರಾಷ್ಟ್ರಗಳು ಕೂಡಾ ಕಳೆದ ಎರಡು ವರ್ಷ ಜಂಟಿಯಾಗಿ ಸಮರಾಭ್ಯಾಸ ನಡೆಸಿವೆ" ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಶಾಂತಿ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಅವರು ಶಾಂತಿ ಪ್ರಕ್ರಿಯೆಯ ಬಗ್ಗೆ ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಈ ಬಗ್ಗೆ ಚರ್ಚೆ ನಡೆಸಿದ್ದರು. ಈ ಬೆನ್ನಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.