ಜಮ್ಮು, ಡಿ.11 (DaijiworldNews/PY): "ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಲಡಾಕ್ ಹಾಗೂ ಜಮ್ಮು-ಕಾಶ್ಮೀರದ ಕೇಂದ್ರ ಪ್ರದೇಶಗಳ ರಾಜಧಾನಿ ನಗರಗಳಾದ ಲೇಹ್ ಹಾಗೂ ಜಮ್ಮು ನಡುವಿನ ವಿಮಾನ ಸಂಚಾರ ಪುನರಾರಂಭಗೊಂಡಿವೆ" ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕೊರೊನಾ ಹಿನ್ನೆಲೆ ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಚ್ನಲ್ಲಿ ವಿಮಾನ ಸಂಚಾರ ಸೇವೆಯ ಮೇಲೆ ನಿರ್ಬಂಧ ಹೇರಿತ್ತು.
"ಲಡಾಖ್ನ ಸ್ವಾಯುತ್ತ ಗುಡ್ಡಗಾಡು ಅಭಿವೃದ್ದಿ ಮಂಡಳಿಯ ಕೋರಿಕೆಯನ್ನು ಗಮನದಲ್ಲಿಟ್ಟುಕೊಂಡು ಲೇಹ್ ಹಾಗೂ ಜಮ್ಮು ವಲಯಗಳ ನಡುವೆ ಏರ್ ಇಂಡಿಯಾ ವಿಮಾನ ಕಾರ್ಯಾಚರಣೆಯನ್ನು ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರದಿಂದ ಪುನರಾರಂಭಿಸಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಪ್ರತಿ ಭಾನುವಾರ, ಬುಧವಾರ ಮತ್ತು ಶುಕ್ರವಾರ ವಿಮಾನಗಳು ಕಾರ್ಯನಿರ್ವಹಿಸಲಿವೆ. ಲೇಹ್ ಹಾಗೂ ಜಮ್ಮು ನಡುವಿನ ವಿಮಾನಗಳ ಪುನರಾರಂಭದಿಂದ ಹಲವು ವಿದ್ಯಾರ್ಥಿಗಳಿಗೆ ಸೇರಿದಂತೆ ರೋಗಿಗಳಿಗೆ ಪ್ರಯೋಜನಕಾರಿಯಾಗಲಿದೆ" ಎಂದಿದ್ದಾರೆ.
ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಲೇಹ್-ಶ್ರೀನಗರ ಮತ್ತು ಲೇಹ್-ಮನಾಲಿ ರಸ್ತೆಗಳು ಮುಚ್ಚಲ್ಪಟ್ಟಿದ್ದು, ಲಡಾಕ್ ಜನರು ದೇಶದ ಇತರ ಭಾಗಗಳಿಗೆ ಪ್ರಯಾಣಿಸಲು ಕೇವಲ ವಿಮಾನಗಳನ್ನು ಅವಲಂಬಿಸಿದ್ದಾರೆ.