ನವದೆಹಲಿ,ಡಿ.11 (DaijiworldNews/HR): ಸರ್ಕಾರದ ನಡೆಗಳ ಮೇಲಿನ ಅನುಮಾನವೇ ರೈತರ ಪ್ರತಿಭಟನೆಗೆ ಕಾರಣವಾಗಿದೆ ಎಂದು ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.
ಈ ಕುರಿತು ಒಕ್ಕೂಟ ವ್ಯವಸ್ಥೆ ಮತ್ತು ಸರ್ಕಾರದ ಮೇಲಿನ ನಂಬಿಕೆ ಕೊರತೆ ಬಗ್ಗೆ ಮಾತನಾಡಿರುವ ಅವರು, "ಸರ್ಕಾರದ ನಡೆಗಳ ಮೇಲಿನ ಅನುಮಾನವೇ ರೈತರ ಪ್ರತಿಭಟನೆಗೆ ಕಾರಣವಾಗಿದೆ, ರೈತರು ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನದಿಂದ ವರ್ತಿಸುತ್ತಿದ್ದಾರೆ. ಈ ಸುಧಾರಣೆಗಳು ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿಲ್ಲ. ಬದಲಿಗೆ, ಅದಕ್ಕಿಂತ ಹೆಚ್ಚಿನದ್ದೇನೋ ಆಗಿರಲಿದೆ. ಇನ್ನೇನೋ ಹೆಚ್ಚು ಕೆಟ್ಟದ್ದಾಗಲಿದೆ ಎಂದು ಅವರು ಹೇಳುತ್ತಿದ್ದಾರೆ ಎಂದರು".
ಇನ್ನು ಸರ್ಕಾರ ಮತ್ತು ಜನರ ನಡುವಣ ನಂಬಿಕೆಯ ಕೊರತೆ ಬಗ್ಗೆ ಮಾತನಾಡಿದ ಅವರರು, ಜನರಿಂದ ತುಂಬ ದೂರದಲ್ಲಿರುವವರು, ಕಡಿಮೆ ಸಂಪರ್ಕ ಹೊಂದಿರುವವರು ದೊಡ್ಡ ಶಾಸನಗಳನ್ನು ಮಾಡಿದಾಗ ಏನಾಗುತ್ತದೆ ಎಂಬುದಕ್ಕೆ ರೈತರ ಪ್ರತಿಭಟನೆ ಉದಾಹರಣೆ ಎಂದು ಹೇಳಿದ್ದಾರೆ.