ನವದೆಹಲಿ, ಡಿ.11 (DaijiworldNews/PY): "ವಿವಿಧ ಕಾರ್ಯಾಚರಣೆಗಳ ಭಾಗವಾಗಿ ಹಿಂದೂಮಹಾಸಾಗರದಲ್ಲಿ120ಕ್ಕೂ ಅಧಿಕ ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ" ಎಂದು ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ಹೇಳಿದ್ದಾರೆ.
ಜಾಗತಿಕ ಭದ್ರತೆ ಕುರಿಂತೆ ಆನ್ಲೈನ್ ಮೂಲಕ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಅನೇಕ ದೇಶಗಳು ಯುದ್ಧದ ಕಾರ್ಯತಂತ್ರದ ದೃಷ್ಠಿಯಿಂದ ಹಿಂದೂಮಹಾಸಾಗರದಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಲು ಸಿದ್ಧವಾಗುತ್ತಿವೆ. ಇದು ಮುಂದಿನ ದಿನಗಳಲ್ಲಿ ವೇಗ ಪಡೆದುಕೊಳ್ಳಲಿದೆ" ಎಂದು ತಿಳಿಸಿದ್ದಾರೆ.
"ನೆರೆಯ ರಾಷ್ಟ್ರವೊಂದು ಸ್ಪರ್ಧೆಯೊಡ್ಡುತ್ತಿದ್ದು, ಈ ನಿಟ್ಟಿನಲ್ಲಿ ಭಾರತ ಕೂಡಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಜಾಗತಿಕವಾಗಿ ಬಲಿಷ್ಠವಾದ ರಾಷ್ಟ್ರವಾಗಿ ಹೊರಹೊಮ್ಮುವ ಅಗತ್ಯವಿದೆ" ಎಂದಿದ್ದಾರೆ.