ತಿರುನಂತವಪುರ, ಡಿ.11 (DaijiworldNews/MB) : ''ಸುಡಾನ್ನಿಂದ ಬಂದಿರುವ ಸೈನಿಕನಲ್ಲಿ ಹೊಸ ಮಲೇರಿಯಾ ಪ್ರಬೇಧ ಪತ್ತೆಯಾಗಿದೆ'' ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ಮಾಹಿತಿನ ನೀಡಿರುವ ಅವರು, ''ಮಲೇರಿಯಾದ ಹೊಸ ಪ್ರಬೇಧ ಪ್ಲಾಸ್ಮೋಡಿಯಂ ಓವಾಲೆ ಪತ್ತೆಯಾಗಿದೆ. ಕಣ್ಣೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈನಿಕನಲ್ಲಿ ಇದು ಪತ್ತೆಯಾಗಿದೆ. ಸೈನಿಕ ಸುಡಾನ್ನಿಂದ ಬಂದಿದ್ದ. ಸಕಾಲಿಕ ಚಿಕಿತ್ಸೆ ಮತ್ತು ಮುಂಜಾಗ್ರತಾ ಕ್ರಮಗಳಿಂದ ರೋಗ ಹರಡುವುದನ್ನು ತಪ್ಪಿಸಬಹುದು'' ಎಂದು ಹೇಳಿದ್ದಾರೆ.
ಮಲೇರಿಯಾದಲ್ಲಿ ಒಟ್ಟು ಐದು ಪ್ರಬೇಧಗಳಿದ್ದು ಅವು ಪ್ಲಾಸ್ಮೋಡಿಯಮ್ ವೈವಾಕ್ಸ್, ಪ್ಲಾಸ್ಮೋಡಿಯಮ್ ಫಾಲ್ಸಿಫಾರಮ್, ಪ್ಲಾಸ್ಮೋಡಿಯಂ ಮಲೇರಿಯಾ, ಪ್ಲಾಸ್ಮೋಡಿಯಮ್ ನೋಲೆಸಿ ಹಾಗೂ ಪ್ಲಾಸ್ಮೋಡಿಯಂ ಓವಾಲೆಯಾಗಿದೆ. ಈ ಪೈಕಿ ಪ್ಲಾಸ್ಮೋಡಿಯಮ್ ವಿವಾಕ್ಸ್ ಹಾಗೂ ಪಾಸ್ಮೋಡಿಯಂ ಫಾಲ್ಸಿಪಾರಮ್ ಭಾರತದಲ್ಲಿ ಸಾಮಾನ್ಯವೆಂದು ವರದಿ ತಿಳಿಸಿದೆ.