ಬೆಂಗಳೂರು, ಡಿ.11 (DaijiworldNews/HR): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಾಂಗ್ರೆಸ್ ಪ್ರೇರಿತವಾಗಿದ್ದು, ರೈತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ನವರುತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸಚಿವ ಎಸ್. ಟಿ. ಸೋಮಶೇಖರ್ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ದೇವೇಗೌಡರು ನೇಗಿಲು ಹಿಡಿದು ಎಷ್ಟು ದಿನ ಆಯ್ತು ಎಂದು ಕೇಳುವವರು ಇಲ್ಲಿಯವರೆಗೆ ಒಮ್ಮೆಯಾದರು ನೇಗಿಲು ಹಿಡಿದಿದ್ದಾರಾ? ಭೂ ಸುಧಾರಣೆ ಕಾಯ್ದೆ ಬಗ್ಗೆ ಬಾಯಿ ಬಡಿದುಕೊಳ್ಳುತ್ತಿರುವ ಕಾಂಗ್ರೆಸ್ನವರು ಜಿಂದಾಲ್ಗೆ ಭೂಮಿ ಕೊಟ್ಟವರು ಎಂದು ಸಿದ್ದರಾಮಯ್ಯ ವಿರಿದ್ಧ ಹರಿಹಾಯ್ದಿದಿದ್ದಾರೆ".
ಇನನು ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ, ಭೂ ಸುಧಾರಣೆ ಮೂರು ಕಾಯ್ದೆಗಳು ರೈತರ ಪರವಾಗಿದೆ ಎಂದು ಸರ್ಕಾರದ ನಿರ್ಧಾರಗಳನ್ನು ಸಚಿವ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ.