ಬೆಂಗಳೂರು, ಡಿ.11 (DaijiworldNews/HR): ಈ ಹಿಂದೆ ಗೋರಕ್ಷಕರ ಜೀವಕ್ಕೆ ಅಪಾಯವಿತ್ತು, ಗೋ ಸಾಗಾಟಗಾರರಿಗೆ ಅಪಾಯವಿರಲಿಲ್ಲ ಹಾಗಾಗಿ ನೂತನ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕರ್ನಾಟಕದಲ್ಲಿ ಅನೇಕ ಗೋ ಸಂರಕ್ಷಕರು ಮಾತ್ರ ಪ್ರಾಣ ಕಳೆದುಕೊಂಡಿದ್ದಾರೆ, ಕರ್ನಾಟಕದಲ್ಲಿ ಗೋ ರಕ್ಷಕರು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಜಾನುವಾರು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಜನರು ಸಂಪೂರ್ಣ ಶಸ್ತ್ರಸಜ್ಜಿತರಾಗಿರುತ್ತಿದ್ದರು. ಅವರು ಜನರನ್ನು ಕೊಲ್ಲುತ್ತಿದ್ದರು" ಎಂದರು.
ಇನ್ನು ಬಿಜೆಪಿ ಸರಕಾರ ಬುಧವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಗೋಹತ್ಯೆ ತಡೆ ಹಾಗೂ ಗೋ ಸಂರಕ್ಷಣೆಯ ಮಸೂದೆಯನ್ನು ಅಂಗೀಕರಿಸಿದೆ.