ಮಧ್ಯಪ್ರದೇಶ, ಡಿ.11 (DaijiworldNews/HR): ಕೊರೊನಾ ಲಸಿಕೆಯನ್ನು ಬಡವರು ಮತ್ತು ದುರ್ಬಲ ವರ್ಗದವರಿಗೆ ಸರ್ಕಾರ ಪೂರೈಸಲಿದೆ, ಆದರೆ ಇದನ್ನು ಖರೀದಿಸುವ ಸಾಮರ್ಥ್ಯವಿರುವವರು ಇದಕ್ಕೆ ಪಾವತಿಸಲೇಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಕೊರೊನಾ ಲಸಿಕೆ ಇತರ ರೋಗಗಳಿರುವ ಹಿರಿಯ ನಾಗರಿಕರು ಮತ್ತು ನಮ್ಮ ಕಾರ್ಯಕರ್ತರಿಗೆ ಮೊದಲು ಸಿಗಬೇಕು. ಯುವಕರು ಮತ್ತು ಆರೋಗ್ಯವಂತರು ಮುಂದೆ ಬಂದು ತಮಗೆ ಮೊದಲು ಲಸಿಕೆ ಅಗತ್ಯವಿಲ್ಲ ಎಂದು ಹೇಳಬೇಕು" ಎಂದರು.
ಇನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ನನ್ನದು 'ಸಿಂಗಲ್ ಮ್ಯಾನ್ ಆರ್ಮಿ' ಎಂದು ಹೇಳಿಕೊಂಡಿರುವ ಚೌಹಾಣ್, ರಾಜ್ಯವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲೂ ಮೂಲಸೌಕರ್ಯ ಸುಧಾರಣೆ ಮಾಡಿರುವುದಾಗಿ ಪ್ರತಿಪಾದಿಸಿದ್ದಾರೆ.