ಶ್ರೀನಗರ, ಡಿ.11 (DaijiworldNews/PY): "ಶ್ರೀನಗರದ ನೂರ್ಬಾಗ್ನ ಸಿಆರ್ಪಿಎಫ್ ಶಿಬಿರದ ಮೇಲೆ ಶುಕ್ರವಾರ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ" ಎಂದು ತಿಳಿಸಿದ್ದಾರೆ.
"ಬೆಳಗ್ಗೆ 6.40ರ ಸುಮಾರಿಗೆ ಉಗ್ರರು ಗ್ರೆನೇಡ್ ಎಸೆದಿದ್ದು, ಶಿಬಿರದ ಹೊರೆಗೆ ಗ್ರೆನೇಡ್ ಸ್ಪೋಟಗೊಂಡಿದೆ. ಈ ಘಟನೆಯಿಂದ ಜೀವಹಾನಿ ಸಂಭವಿಸಿಲ್ಲ" ಎಂದು ಹೇಳಿದ್ದಾರೆ.
"ಗ್ರೆನೇಡ್ ದಾಳಿ ನಡೆಸಿದ ಉಗ್ರರ ವಿರುದ್ದ ಕಾರ್ಯಾಚರಣೆ ಮುಂದುವರೆದಿದೆ" ಎಂದಿದ್ದಾರೆ.