ಬೆಂಗಳೂರು, ಡಿ.11 (DaijiworldNews/MB) : ಬೆಂಗಳೂರಿನ ತಮ್ಮ ನಿವಾಸದಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಗೋವುಗಳಿಗೆ ಪೂಜೆ ನೆರವೇರಿಸಿದರು ಎಂದು ವರದಿಯಾಗಿದೆ.
ಬುಧವಾರವಷ್ಟೇ ವಿಧಾನಸಭೆಯಲ್ಲಿ ಕರ್ನಾಟಕ ಗೋ ಸಂರಕ್ಷಣೆ ಮತ್ತು ಹತ್ಯೆ ಮಸೂದೆ 2020ನ್ನು ಅಂಗೀಕಾರವಾಗಿದೆ. ಗುರುವಾರ ವಿಧಾನ ಪರಿಷತ್ ನಲ್ಲಿ ಈ ಮಸೂದೆ ಮಂಡನೆ ಸಾಧ್ಯವಾಗಿಲ್ಲ. ಈ ನಡುವೆ ವಿಧಾನ ಸಭೆಯಲ್ಲಿ ಅಂಗೀಕಾರವಾದ ಬಳಿಕ ಬಿಜೆಪಿ ನಾಯಕರು ಗೋ ಪೂಜಾ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಹಿನ್ನಲೆಯಲ್ಲಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗ ಗೋ ಪೂಜೆ ನಡೆಸಿದರು.