ಮೈಸೂರು, ಡಿ.11 (DaijiworldNews/PY): "ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಗೋಹತ್ಯೆ ನಿಷೇಧ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುತ್ತೇವೆ" ಎಂದು ಕಾಂಗ್ರೆಸ್ ಹೇಳಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮಾತನಾಡಿ, "ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಲ್ಲಿ ರೈತ ವಿರೋಧಿ ಕಾನೂನಗಳನ್ನು ರದ್ದುಪಡಿಸುತ್ತೇವೆ" ತಿಳಿಸಿದರು.
"ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ನೊಂದಿಗೆ ಕೈ ಜೋಡಿಸುವುದಿಲ್ಲ. ಸೋನಿಯಾ ಗಾಂಧಿ ಅವರಿಗೂ ಕೂಡಾ ಜೆಡಿಎಸ್ನ ಬಣ್ಣ ಏನು ಎಂದು ತಿಳಿಯಿತು. ಹೆಚ್ಡಿಕೆ ಅವರು ಸಿಎಂ ಆಗಿದ್ದ ಸಂದರ್ಭ ಸುಳ್ಳನ್ನೇ ಹೇಳುತ್ತಿದ್ದರು" ಎಂದರು.
"ಯಾವುದೇ ಕಾರಣಕ್ಕೂ ಕೂಡಾ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಯಾರಾದದೂ ಬಂದು ಅರಮನೆ ಬರೆದುಕೊಡಿ ಎಂದರೆ ಆಯಿತು" ಎಂದು ಹೇಳುತ್ತಿದ್ದರು ಎಂದು ಹೇಳಿದರು.