ಜೈಪುರ್, ಡಿ.11 (DaijiworldNews/HR): ರಾಜಸ್ಥಾನದ ಕೋಟಾ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಒಂದು ಗಂಟೆ ಅವಧಿಯಲ್ಲಿ ಒಂಬತ್ತು ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದು,ಈ ಘಟನೆ ಕುರಿತು ತನಿಖೆ ನಡೆಸಲು ಆರೋಗ್ಯ ಸಚಿವ ರಘು ಶರ್ಮಾ ಆದೇಶ ನೀಡಿರುವುದಾಗಿ ವರದಿ ಹೇಳಿದೆ.
"ನವಜಾತ ಶಿಶುಗಳ ಸಾವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಸೂಪರಿಟೆಂಡೆಂಟ್ ಸುರೇಶ್ ದುಲಾರಾ, ಇದು ಸಹಜವಾಗಿ ಸಂಭವಿಸಿದ ಸಾವು, ಯಾವುದೇ ಗಂಭೀರ ಕಾರಣ ಅಥವಾ ಸೋಂಕಿನಿಂದ ಆಗಿಲ್ಲ" ಎಂದು ತಿಳಿಸಿದ್ದಾರೆ.
ಘಟನೆ ಕುರಿತು ತಿಳಿದ ಡಿವಿಜನಲ್ ಕಮಿಷನರ್ ಕೆಸಿ ಮೀನಾ ಹಾಗೂ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ಆಸ್ಪತ್ರೆಗೆ ಭೇಟಿ ನೀಡಿ ಸಭೆ ನಡೆಸಿರುವುದಾಗಿ ವರದಿ ತಿಳಿಸಿದೆ.