ರಾಮನಗರ, ಡಿ.11 (DaijiworldNews/PY): "ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಸ್ಕೆಚ್ ಹಾಕಿ ಉರುಳಿಸಿದ್ದು ನಾನೇ" ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.
ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, "ಅಂದು ಜೋಡೆತ್ತು ಇತ್ತು. ಇಂದು ಕಿತ್ತಾಡಿಕೊಳ್ಳುತ್ತಿದ್ದಾರೆ. ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಶಿವಕುಮಾರ್ ತಿಹಾರ್ ಜೈಲಿಗೆ ಹೋದ. ಕರ್ನಾಟಕದಿಂದ ತಿಹಾರ್ ಜೈಲಿಗೆ ಹೋದವನು ಶಿವಕುಮಾರ್ ಒಬ್ಬನೆ. ಇದೀಗ ಕೆಪಿಸಿಸಿ ಅಧ್ಯಕ್ಷ. ಶಿವಕುಮಾರ್ ತಮ್ಮ ಸುರೇಶ್ ನನ್ನು ಯಾರು ಎಂದು ಕೇಳಿದ್ದ. ಇದೀಗ ಅಣ್ಣ-ತಮ್ಮನಿಗೆ ಚೆನ್ನಪಟ್ಟಣದ ಶಕ್ತಿ ಏನು ಎಂದು ತಿಳಿಯುತ್ತಿದ್ದೆ" ಎಂದು ಕೆಂಡಾಕಾರಿದ್ದಾರೆ.
"ನಾನು ಏನೆಂದು ದೇವೇಗೌಡರ ಮನೆಯವರಿಗೂ ಕೂಡಾ ತಿಳಿದಿದೆ. ಹೆಚ್.ಡಿ.ಕುಮಾರಸ್ವಾಮಿ ಚೆನ್ನಪಟ್ಟಣದ ಹತ್ತು ಊರಿನ ಹೆಸರು ಹೇಳಿದ್ದೇ ಆದಲ್ಲಿ ನಾನು ಎಂಎಲ್ಸಿಗೆ ರಾಜೀನಾಮೆ ನೀಡುತ್ತೇನೆ" ಎಂದಿದ್ದಾರೆ.