ದಾವಣಗೆರೆ, ಡಿ.11 (DaijiworldNews/HR): ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ದಲ್ಲಾಳಿಗಳಿದ್ದಾರೆ. ರೈತರ ಸಮಸ್ಯೆಗಳನ್ನು ಕೇಳುವುದಕ್ಕೆ ಸರ್ಕಾರ ಸಿದ್ಧವಿದೆ, ಆದರೆ ಯಾವ ರೈತ ಮುಖಂಡರು ಸಮಸ್ಯೆ ಹಂಚಿಕೊಳ್ಳಲು ತಯಾರಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೈತರು ನಡೆಸುತ್ತಿರು ಪ್ರತಿಭಟನೆ ಸರ್ಕಾರ ಯಾವಾಗಲೂ ಸ್ಪಂದಿಸಲು ಸಿದ್ದವಾಗಿದೆ. ಆದರೆ ರೈತ ಮುಖಂಡರು ಸರ್ಕಾರದ ಜತೆ ಮಾತನಾಡಿ ಸಮಸ್ಯೆಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲ" ಎಂದರು.
ಇನ್ನು "ಪ್ರತಿ ಜಿಲ್ಲೆಗೊಂದರಂತೆ ಗೋ ಶಾಲೆ ಪ್ರಾರಂಭಿಸುವ ಚಿಂತನೆಯನ್ನು ಮಾಡುತ್ತಿದ್ದು, ಅದಕ್ಕಾಗಿ ಉಸ್ತುವಾರಿಗೆ ಅಧಿಕಾರಿಗಳ ನೇಮಕ ಮಾಡಲಾಗುವುದು. ವಿರೋಧ ಪಕ್ಷಗಳ ಹೇಳಿಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಜಾನುವಾರು ಸಂತೆಗಳ ಮೇಲೆ ನಿಗಾ ವಹಿಸಲು ಚಿಂತನೆ ನಡೆಸಲಾಗಿದೆ" ಎಂದು ಹೇಳಿದ್ದಾರೆ.