ಬೆಂಗಳೂರು, ಡಿ.11 (DaijiworldNews/HR): ನವದೆಹಲಿಯ ಹೊಸ ಸಂಸತ್ತು ಭವನಕ್ಕೆ ಅಡಿಗಲ್ಲು ಹಾಕಿದ ಬಳಿಕ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಮಾತನಾಡಿದ್ದು ಇದೀಗ ವೈರಲ್ ಆಗಿದೆ.
ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಆಧಾರದ ಮೇಲೆ ಸಂಸತ್ತು ಭವನ ನಿರ್ಮಾಣ ರೂಪುಗೊಂಡಿದ್ದು, 'ಲಿಂಗಾಯತ' ನಂಬಿಕೆಯ ಅತೀಂದ್ರಿಯರು, ಸಂತರು ಆಗಿರುವ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವನ್ನು ಮೋದಿ ಉಲ್ಲೇಖಿಸಿದ್ದಾರೆ. ಅನುಭವ ಮಂಟಪ ಬೀದರ್ ಜಿಲ್ಲೆಯ ಬಸವಕಲ್ಯಾಣ್ ತಾಲ್ಲೂಕಿನಲ್ಲಿದೆ.
ಕನ್ನಡದಲ್ಲಿ ಮಾತನಾಡಿದ ಮೋದಿ, "ಅನುಭವ ಮಂಟಪ ನಾಡಿನ ಜನರ ಅಭಿವೃದ್ಧಿಗಾಗಿ ಮತ್ತು ಉನ್ನತಿಗಾಗಿ ಕೆಲಸ ಮಾಡುತ್ತದೆ ಎಂದರು".
ಮೋದಿಯವರ ಕನ್ನಡ ಭಾಷಣದಿಂದ ಸಂತೋಷಗೊಂಡ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಟ್ವೀಟ್ ಮಾಡಿ, "ಕನ್ನಡ ಭಾಷೆಯಲ್ಲಿ ಸಂತ ಬಸವಣ್ಣ ಮತ್ತು ಅನುಭವ ಮಂಟಪ ಬಗ್ಗೆ ನಿಮ್ಮ ಉಲ್ಲೇಖಕ್ಕಾಗಿ ನಾನು ತುಂಬಾ ಗೌರವವನ್ನು ಹೊಂದಿದ್ದೇನೆ. ಮತ್ತೊಮ್ಮೆ ಮೋದಿಗೆ ಧನ್ಯವಾದಗಳು" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು "ಹೊಸ ಸಂಸತ್ತು ವಿಶ್ವದ ಅತ್ಯಂತ ಹಳೆಯ ನಾಗರಿಕತೆ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವದ ಭವ್ಯ ಪ್ರಾತಿನಿಧ್ಯವಾಗಲಿದೆ, ಇದು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಸಂಯೋಜಿಸುತ್ತದೆ" ಎಂದು ಅವರು ಹೇಳಿದ್ದಾರೆ.
ಹೊಸ ಸಂಸತ್ತಿನ ಕಟ್ಟಡವು ರಾಷ್ಟ್ರದ ಹೆಮ್ಮೆಯಾಗಲಿದೆ ಮತ್ತು ಇದು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಹೆಜ್ಜೆಯಾಗಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ನಲ್ಲಿ ತಿಳಿಸಿದೆ.