ಬೆಂಗಳೂರು, ಡಿ.11 (DaijiworldNews/MB) : 'ರಾಜ್ಯ ಬಿಜೆಪಿಯು ಪ್ರಾಣಿಗಳನ್ನು ಪ್ರೀತಿಸಿದಷ್ಟು ನಮ್ಮ ಜನರನ್ನು ಪ್ರೀತಿಸಿದ್ದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು' ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರತಿರೋಧದ ನಡುವೆಯೂ ವಿಧೇಯಕ ಅಂಗೀಕಾರಗೊಂಡಿತು. ಈ ವಿಚಾರವಾಗಿ ರಾಜ್ಯ ಬಿಜೆಪಿಯ ವಿರುದ್ದ ಕಾಂಗ್ರೆಸ್ ಮುಖಂಡ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ರೈತರು, ಕಾರ್ಮಿಕರು, ವೈದ್ಯರು, ಸಾರಿಗೆ ಮತ್ತು ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರಾಜಕೀಯ ಲಾಭಕ್ಕಾಗಿ, ಕೆಲಸಕ್ಕೆ ಬಾರದ ಕಾನೂನುಗಳನ್ನು ತರಲು ಮಾತ್ರ ಸರ್ಕಾರ ಉತ್ಸುಕತೆ ಪ್ರದರ್ಶಿಸುತ್ತಿದೆ. ಕರ್ನಾಟಕ ಬಿಜೆಪಿ ಪ್ರಾಣಿಗಳನ್ನು ಪ್ರೀತಿಸಿದಷ್ಟು ನಮ್ಮ ಜನರನ್ನು ಪ್ರೀತಿಸಿದ್ದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು!'' ಎಂದು ಟೀಕಿಸಿದ್ದಾರೆ.