ಮಂಗಳೂರು, ಡಿ. 10 (DaijiworldNews/SM): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಇನ್ನು ಮುಂದೆ ಸಿದ್ದರಾಮಯ್ಯ ಹೋರಾಟವನ್ನೇ ಮಾಡಬೇಕು. ಹೋರಾಟದ ಹೆಸರಲ್ಲಿ ಬೀದಿಯಲ್ಲೇ ಬಿದ್ದುಕೊಂಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಗೋಹತ್ಯೆ ನಿಷೇಧ ವಿಧೇಯಕ ಜಾರಿಗೊಳಿಸುವ ಸಂದರ್ಭ ಚರ್ಚೆ ನಡೆದಿಲ್ಲ ಎನ್ನುವ ಆರೋಪವನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾಡಿದ್ದರು. ಈ ಆರೋಪಕ್ಕೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್, ಸಿದ್ದರಾಮಯ್ಯ ೨೦-೩೦ ವರ್ಷ ಹೋರಾಟವನ್ನೇ ಮಾಡಬೇಕು. ಹೋರಾಟ ಮಾಡಿ ಬೀದಿಯಲ್ಲೇ ಬಿದ್ದುಕೊಂಡಿರಬೇಕು. ಸಿದ್ದರಾಮಯ್ಯರದ್ದು, ರೈತರ ವಿರುದ್ಧದ ಹೋರಾಟವೇ? ಅಥವಾ ಯಾರ ವಿರುದ್ಧ ಹೋರಾಟ ಎಂಬುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಏಕಾಂಗಿಯಾಗಿ ಮಸೂದೆಯನ್ನು ರದ್ದುಗೊಳಿಸಿ, ನಿರ್ಧಾರವನ್ನು ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಸದನದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಹಾಗಿದ್ದ ಹಿನ್ನೆಲೆಯಲ್ಲಿ ಈಗ ಮಸೂದೆ ಜಾರಿಗೆ ತಂದಾಗ ಚರ್ಚೆಯ ಅವಶ್ಯಕತೆ ಇದೆಯಾ ಎಂಬುವುದಾಗಿ ಅವರು ಪ್ರಶ್ನಿಸಿದ್ದಾರೆ.