ನವದೆಹಲಿ, ಡಿ.10 (DaijiworldNews/HR): ಇಂದು ಶಂಕುಸ್ಥಾಪನೆಗೊಂಡ ನೂತನ ಸಂಸತ್ ಭವನ ನಿರ್ಮಾಣವು ಮಹತ್ವದ ಯೋಜನೆಯಾಗಿದ್ದು, ಇದು ಎಲ್ಲ ರೀತಿಯ ಯಶಸ್ಸು ಕಾಣಲಿ ಎಂದು ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ ಶುಭ ಹಾರೈಸಿದ್ದಾರೆ.
ಈ ಕುರಿತು ಸಂಸತ್ನ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, "ಇದೊಂದು ಮಹತ್ವದ ಯೋಜನೆಯಾಗಿದ್ದು, ಎಲ್ಲ ರೀತಿಯ ಯಶಸ್ಸು ಕಾಣಲಿ,ಎಂದು ಹಾರೈಸಿದ್ದಾರೆ.
ಇನ್ನು ಶಂಕುಸ್ಥಾಪನಾ ಸಮಾರಂಭಕ್ಕೆ ತಮ್ಮನ್ನು ವಿಶೇಷವಾಗಿ ಆಹ್ವಾನಿಸಿದ್ದಕ್ಕಾಗಿ ರತನ್ ಟಾಟಾ ಸಂತಸ ವ್ಯಕ್ತಪಡಿಸಿದ್ದಾರೆ.
ಶಂಕುಸ್ಥಾಪನಾ ಸಂಪುಟದ ಸಚಿವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಹಲವು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.